Wednesday 30 July 2014

ಮಕ್ಕಳ ಹಕ್ಕುಗಳು

ಮಕ್ಕಳ ಹಕ್ಕುಗಳ ಕುರಿತಾದ ವಿಶೇಷ ಲೇಖನಇಂದಿನ ಮಕ್ಕಳೇ ನಾಳಿನ ನಾಗರಿಕರು. ನಾಳಿನ ಸಮಾಜದ ಆಸ್ತಿ.“ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ” ಎಂದು ತಿಳಿದವರು ಹೇಳಿದ್ದಾರೆ. ಮಕ್ಕಳು ಸಮಾಜದ ಆಸ್ತಿಯಾಗಬೇಕಾದರೆ ಅದಕ್ಕೆ ಪೂರಕವಾಗಿ ಅವರಿಗೆ ವಾತಾವರಣ ವಿರಬೇಕು. ಆದರೆ ಇಂದು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಸಮಾಜದ ಎಲ್ಲ ಸ್ಥರಗಳಲ್ಲಿ ಮಕ್ಕಳನ್ನು ಶೋಷಣೆಗೆ ಗುರಿಪಡಿಸುವುದನ್ನು ಕಾಣುತ್ತೇವೆ. ದಿನ ಪತ್ರಿಕೆಯನ್ನು ನೋಡಿ, ತಂದೆಯಂದಲೇ ಮಗಳ ಅತ್ಯಾಚಾರ, ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಶಿಕ್ಷಕ, ಹಣಕ್ಕಾಗಿ ಮಗುವಿನ ಅಪಹರಣ, ಬಸ್ ನಿಲ್ದಾಣದಲ್ಲಿ ಅನಾಥ ಮಗುವಿನ ಪತ್ತೆ, ಕಸದ ತೊಟ್ಟಿಯಲ್ಲಿ ಸಿಕ್ಕ ಹಸುಗೂಸು ಇವೆಲ್ಲ ಮಕ್ಕಳ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಸಮಾಜದ ಎಲ್ಲ ಕಡೆ ನಾಳಿನ ಆಸ್ತಿಯಾಗಬೇಕಾದ ಮಗು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದೆ. ಹೀಗೆ ಶೋಷಣೆಗೆ ಒಳಗಾಗುತ್ತಿರುವ ಮಗುವಿನ ರಕ್ಷಣೆ ಹೇಗೆ?ಮಕ್ಕಳ ರಕ್ಷಣೆಗೆ ಇರುವ ಕಾನೂನಿನ ಅವಕಾಶಗಳೇನು? ಎಷ್ಟರ ಮಟ್ಟಿಗೆ ನಮಗೆ ಇದರ ಬಗ್ಗೆ ತಿಳಿದಿದೆ? ಎಂಬ ಬಗ್ಗೆ ಆಲೋಚಿಸುತ್ತಾ ಹೋದಂತೆ ಮೊದಲನೆಯದಾಗಿ ವಿಶ್ವದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ನವೆಂಬರ್ 1989 ರಲ್ಲಿ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿದೆ.ಈ ಚಾರ್ಟರ್ ನಲ್ಲಿ ರೂಪಿಸಿರುವಂತೆ ಮಕ್ಕಳಿಗೆ ಈ ಕೆಳಕಂಡಂತೆ ಹಕ್ಕುಗಳನ್ನು ಒದಗಿಸಲಾಗಿದೆ.



1.ಜೀವಿಸುವ ಹಕ್ಕು 2.ಶಿಕ್ಷಣ ಪಡೆಯುವ ಹಕ್ಕು 3.ಆರೋಗ್ಯದ ಹಕ್ಕು4.ಪೌಷ್ಟಿಕ ಆಹಾರ ಪಡೆಯುವ ಹಕ್ಕು 5.ವಿಶ್ರಾಂತಿ ಪಡೆಯುವ ಹಕ್ಕು 6.ಆಟವಾಡುವ ಹಕ್ಕು7.ಉತ್ತಮ ಜೀವನಮಟ್ಟ ಪಡೆಯುವ ಹಕ್ಕು8.ಶೋಷಣೆ & ತಿರಸ್ಕಾರದ ವಿರುದ್ಧ ರಕ್ಷಣೆ ಪಡೆಯುವ ಹಕ್ಕು9.ದೂಷಣೆ &ಅನೀತಿಯಿಂದ ರಕ್ಷಣೆ ಪಡೆಯುವ ಹಕ್ಕು. 10.ಡ್ರಗ್ಸ್ &ಮಾದಕ ವಸ್ತುಗಳ ದುರ್ಬಳಕೆಯಿಂದ ರಕ್ಷಣೆ ಪಡೆಯುವ ಹಕ್ಕು11.ಒತ್ತಾಯದ ದುಡಿಮೆಯಿಂದ ರಕ್ಷಿಸಿಕೊಳ್ಳುವ ಹಕ್ಕು. 12.ಹಿಂಸೆಯಿಂದ ರಕ್ಷಣೆ ಪಡೆಯುವ ಹಕ್ಕು.ಭಾರತವು 1992ರಲ್ಲಿ ವಿಶ್ವ ಸಂಸ್ಥೆ ರೂಪಿಸಿದ ಈ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿದೆ.ನಮ್ಮ ಸಂವಿಧಾನದಲ್ಲಿ ಸಹ ಮಕ್ಕಳ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ&ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವಿದೆ. ಮಕ್ಕಳಿಗಾಗಿ ಸಹಾಯವಾಣಿ ಸಹ ರೂಪಿಸಲಾಗಿದೆ (1098). ಕಡ್ಡಾಯ ಶಿಕ್ಷಣ ಜಾರಿಗೆ ಸಹ ತರಲಾಗಿದೆ. ಆದರೂ ಸಹ ಮಕ್ಕಳ ಶೋಷಣೆ ನಿಂತಿಲ್ಲ ಎನ್ನುವುದು ಖೇದದ ಸಂಗತಿ.

ಲೇಖನ-ಗ್ರಾಹಕಸಂಘ .ಪ್ರೌ.ಶಾ.ಕೆದೂರು